Tuesday, April 14, 2009
Tuesday, February 17, 2009
ಎಡ ಪಂಥೀಯ ಪತ್ರಕತಱರ ಮಠ್ಠಾಳತನ
ಕೆಲವು ಪತ್ರಕತಱರು ಇರುತ್ತಾರೆ ನಮಗೆ ಎಲ್ಲವೂ ಗೊತ್ತು ಎಂಬಂತೆ ಮೆರೆಯತ್ತಿರುತ್ತಾರೆ. ಆದರೆ ಇವರ ತಲೆ ಸೀಳಿದರೆ,ಮೂರು ಅಕ್ಷರವೂ ಸಿಗುವುದಿಲ್ಲ. ಹುಟ್ಟಾ ಸೋಮಾರಿಗಳು,ಇವರ ತಲೆಯಲ್ಲಿ ಮಿದುಳೇ ಇರುವುದಿಲ್ಲ ಬಾಯಿ ಮಾತ್ರ ಬೊಂಬಾಯಿ ಆಗಿರುತ್ತದೆ. ನಿತ್ಯ ಕುಡಿಯದೆ ನಿದ್ದೆ ಬರದ ಪತ್ರಕತಱರನ್ನು ಎಡಪಂಥೀಯ ಪತ್ರಕತಱರು ಎಂದು ಕರೆಯಬಹುದು. ಬಹುತೇಕ ಕುಡಕರು ಎಡಪಂಥೀಯ ಪತ್ರಕತಱರಾಗಿರುತ್ತಾರೆ ಎಂಬುದು ಇಲ್ಲಿನ ವಿಶೇಷ. ಜತೆಗೆ ಭಯೋತ್ಪಾದಕರು ಎಂಬುದರಲ್ಲಿ ಸಂಶಯವಿಲ್ಲ.
ಮುಂದೆ ಬರೆಯುತ್ತೇನೆ.... ಕಾಯಿರಿ
ಮುಂದೆ ಬರೆಯುತ್ತೇನೆ.... ಕಾಯಿರಿ
Monday, February 16, 2009
ಇಂದಿನ ಪತ್ರಿಕೋದ್ಯಮ: ಕೆಲವು ಟಿಪ್ಪಣಿಗಳು
ಇಂದಿನ ಪತ್ರಿಕೋದ್ಯಮ: ಒಂದಷ್ಟು ಟಿಪ್ಪಣಿಗಳು
ದೇಶದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ನಂತರ ನಾಲ್ಕನೇ ಅಂಗ (ಫೋರ್ತ್ ಎಸ್ಟೇಟ್) ಎಂದು ಪತ್ರಿಕೋದ್ಯಮವನ್ನು ಕರೆಯಲಾಗುತ್ತದೆ. ಅಂಥ ದೊಡ್ಡ ಘನತೆ ಮತ್ತು ಜವಾಬ್ದಾರಿ ಪತ್ರಿಕೋದ್ಯಮಕ್ಕೆ ಇದೆ. ವಿಶ್ವದ ಪತ್ರಿಕೋದ್ಯಮಕ್ಕೆ ಸುಮಾರು ೩೦೦ ವರ್ಷಗಳ ಇತಿಹಾಸ ಇದೆ. ೧೮ನೇ ಶತಮಾನದಲ್ಲಿ ಜೇಮ್ಸ್ ಅಗಸ್ಟಸ್ ಹಿಕ್ಕಿ ಎಂಬಾತನು ಆರಂಭಿಸಿದ ’ದಿ ಬೆಂಗಾಲ್ ಜನರಲ್ ಅಡ್ವರ್ಟೈಸರ್’ ಅಥವಾ ’ಹಿಕ್ಕೀಸ್ ಗೆಜೆಟ್’ ಎಂಬ ಪತ್ರಿಕೆಯ ಮೂಲಕ ಈ ದೇಶದ ಪತ್ರಿಕೋದ್ಯಮ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಸಾಗಿ ಬಂದ ಪತ್ರಿಕೋದ್ಯಮದ ಇತಿಹಾಸ ಬಲು ವಿಶಾಲವಾದುದು.
ಇಂಥ ವಿಶಾಲ ಪತ್ರಿಕೋದ್ಯಮದ ಒಟ್ಟಾರೆ ಒಳಹರಿವು (ಅಂಡರ್ ಕರೆಂಟ್) ಎಂದರೆ, ಜನಹಿತವೇ ಆಗಿದೆ. ’ಬಹುಜನ ಹಿತಾಯ; ಬಹುಜನ ಸುಖಾಯ’ ಎಂಬುದು ಪತ್ರಿಕೋದ್ಯಮದ ಮೂಲ ಮಂತ್ರ- ಎಂಬುದು ನನ್ನ ಭಾವನೆ. ಜನರಿಗೆ ಅತ್ಯಂತ ನಿಖರವಾದ, ಸಮಾಜಕ್ಕೆ ಒಳ್ಳೆಯದಾಗುವ ಮಾಹಿತಿಯನ್ನು ನೀಡುವುದು ಪತ್ರಿಕೋದ್ಯಮದ ಮುಖ್ಯ ಗುರಿ ಎಂದು ನಾನು ಭಾವಿಸಿದ್ದೇನೆ.
ಸ್ವತಂತ್ರ ಪೂರ್ವದಲ್ಲಿ ಪತ್ರಿಕೆಗಳು ನಮ್ಮ ದೇಶದ ಸ್ವಾತಂತ್ರ್ಯ ಗಳಿಸುವುದನ್ನೇ ತಮ್ಮ ಧ್ಯೇಯವನ್ನಾಗಿಸಿಕೊಂಡಿದ್ದವು. ಸತ್ಯ ಮತ್ತು ನಿಖರತೆಯಿಂದ ಅವುಗಳು ಅಪ್ಪಟ ಚಿನ್ನದಂತೆ ಕಂಗೊಳಿಸುತ್ತಿದ್ದವು. ಸ್ವಾತಂತ್ರ್ಯಾನಂತರ ನಾಲ್ಕನೇ ಎಸ್ಟೇಟ್ನ ಕೆಲಸವನ್ನು ನಿರ್ವಹಿಸುತ್ತಾ, ಆಳುವವರನ್ನು ತಿದ್ದುವ, ಉತ್ತಮ ಆಡಳಿತ ನೀಡಲು, ಜನರ ಹಿತ ಕಾಪಾಡಲು ಬದ್ಧವಾಗಿದ್ದವು ಮತ್ತು ತಮ್ಮ ಬದ್ಧತೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತಿದ್ದವು.
ಪತ್ರಿಕೋದ್ಯಮ ಇಂದು ಕವಲು ಹಾದಿಯಲ್ಲಿದೆ ಎಂದು ಹೇಳಿದರೆ ಅದು ತುಂಬ ಹಳೆಯ ಮಾತಾಗುತ್ತದೆ. ಆಗಲೇ ಪತ್ರಿಕೋದ್ಯಮ ಯಾವುದೇ ಕಾಣದ ದಾರಿಯಲ್ಲಿ ತನ್ನ ಕಣ್ಣಿಗೆ ಪಟ್ಟಿಕೊಂಡು ಪಯಣ ಹೊರಟುಬಿಟ್ಟಿದೆ.
ಪತ್ರಿಕೋದ್ಯಮ ಜನ ಕೇಂದ್ರಿತವಾಗಿತ್ತು. ಜನರ ಬೇಕು ಬೇಡಗಳಿಗೆ ಸ್ಪಂದಿಸುತ್ತಿತ್ತು. ಅದಕ್ಕೆ ಬೇಕಾದ ಅಧ್ಯಯನಶೀಲತೆ, ಅಚ್ಚುಕಟ್ಟುತನ, ತಮ್ಮ ವೈಯಕ್ತಿಕ ಬದ್ಧತೆಯಲ್ಲಿ ಎಳ್ಳಷ್ಟೂ ದೋಷವಿಲ್ಲದಿರುವುದು ಎದ್ದು ಕಾಣುತ್ತಿತ್ತು. ಅಲ್ಲಿಂದ ಮುಂದಕ್ಕೆ ಕಳೆದ ಎರಡು ದಶಕಗಳಲ್ಲಿ ಕತ್ತಲೆಯ ದಾರಿಯಲ್ಲಿ ಸಾಗಿದೆ. ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಅದಕ್ಕೇ ಗೊತ್ತಿಲ್ಲ.
ಇದು ಮಾಹಿತಿ ಯುಗ: ಇನ್ಫರ್ಮೇಷನ್ ಎಕ್ಸ್ಪ್ಲೋಷನ್ ಆಗಿದೆ. ಆಗುತ್ತಲೇ ಇದೆ. ಮಾಹಿತಿಯನ್ನು ವ್ಯಾಪಕವಾಗಿ ಪಡೆಯಬಹುದು. ಕಂಪ್ಯೂಟರ್ನ ಒಂದು ಕೀಲಿಮಣೆಯ ಮೇಲೆ ಕೈಯಾಡಿಸಿದರೆ ಸಾಕು ಬೇಕಾದ ಮಾಹಿತಿ ದಕ್ಕುತ್ತದೆ. ಅಂತಹ ಕಾಲದಲ್ಲಿ ನಾವಿದ್ದೇವೆ. ’ಇನ್ಫರ್ಮೇಷನ್ ಈಸ್ ಪವರ್’ ಎಂದೇ ಹೇಳಲಾಗುತ್ತಿದೆ.
ಆದರೆ, ಪತ್ರಿಕೋದ್ಯಮ ಅಥವಾ ಎಲ್ಲವನ್ನೂ ಒಳಗೊಂಡಂತೆ ಹೇಳಬೇಕಾದರೆ, ಮಾಧ್ಯಮ- ಮೀಡಿಯಾ ಇಂದು ನಾವಿಕನಿಲ್ಲದ ಹಡಗಿನಂತಾಗಿದೆ. ಏನಾದರೂ ಗುರಿ ಇದೆಯೇ ಎಂದು ನೋಡಿದರೆ, ಲಾಭ ಗಳಿಸುವುದೊಂದೇ ಗುರಿ ಎಂಬುದು ಎದ್ದು ಕಾಣುತ್ತಿದೆ. ಅದಕ್ಕೇ ಇಷ್ಟೆಲ್ಲ ಸ್ಪರ್ಧೆ. ಅದಕ್ಕಾಗಿಯೇ ಇಷ್ಟೊಂದು ಸಾಹಸಗಳನ್ನು ಮಾಡಬೇಕಾಗಿ ಬಂದಿದೆ.
ಇನ್ನು ಸದ್ಯದ ಪತ್ರಿಕೋದ್ಯಮದ ಕುರಿತಂತೆ ಒಳ್ಳೆಯ ಮಾತುಗಳನ್ನು ಹೇಳಬೇಕೆಂದರೆ, ಪತ್ರಿಕೆಗಳು ಹೆಚ್ಚೆಚ್ಚು ಸುಂದರವಾಗಿವೆ. ಅವುಗಳ ಬೆಲೆಗಳು ಕಡಿಮೆಯಾಗಿವೆ. ಹಳ್ಳಿಯ ಜನರೂ ಕೊಂಡು ಪತ್ರಿಕೆಗಳನ್ನು ಓದುವ ಸ್ಥಿತಿ ನಿರ್ಮಾಣವಾಗಿದೆ. ಅವುಗಳ ಪೇಜುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಉಂಟಾಗಿದೆ.
ಒಟ್ಟಾರೆ ಮಾಧ್ಯಮಗಳ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಬೇಕೆಂದರೆ, ಪ್ರತಿಯೊಬ್ಬ ಜನ ಸಾಮಾನ್ಯನನ್ನು ತಲುಪುವಲ್ಲಿ ಅವುಗಳು ಯಶಸ್ವಿಯಾಗಿವೆ. ಮಾಹಿತಿ, ಮನರಂಜನೆ, ಶಿಕ್ಷಣ- ಇತ್ಯಾದಿಗಳನ್ನು ನೀಡುವಲ್ಲಿ ನಾ ಮುಂದು ನೀ ಮುಂದು ಎಂದು ಓಡೋಡಿ ಹೋಗುತ್ತಿವೆ.
ಆದರೆ, ಮಾರುಕಟ್ಟೆ ಹಿಡಿತಕ್ಕೆ ಎಲ್ಲ ಕ್ಷೇತ್ರಗಳು ಸಿಕ್ಕಿಕೊಂಡ ಹಾಗೆಯೇ ಪತ್ರಿಕೋದ್ಯಮವೂ ಸಿಕ್ಕಿಕೊಂಡು ಬಿಟ್ಟಿದೆ. ಟೂತ್ ಪೇಸ್ಟ್, ಟಾಯ್ಲೆಟ್ ಸೋಪ್, ಶೇವಿಂಗ್ ಕ್ರೀಮ್-ನಂತಹ ’ಫಾಸ್ಟ್ ಮೂವಿಂಗ್ ಕಂಸುಮರ್ ಗೂಡ್ಸ್’ನಂತೆ ಪತ್ರಿಕೋದ್ಯಮವೂ ಆಗಿಬಿಟ್ಟಿದೆ.
ಒಟ್ಟಾರೆ ಪತ್ರಿಕೋದ್ಯಮವನ್ನು ಗಮನಕ್ಕೆ ತೆಗೆದುಕೊಂಡರೆ, ಆಳುವವರ ಮತ್ತು ಬಂಡವಾಳಶಾಹಿಗಳ ಮುಖವಾಣಿಗಳಾಗಿ ಪತ್ರಿಕೆಗಳು/ ಮಾಧ್ಯಮಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಅವರು ತಯಾರು ಮಾಡಿದ ಬಣ್ಣ ಬಣ್ಣದ ಹೊಸ ಹೊಸ ಗೂಡ್ಸ್ಗಳನ್ನು ಗ್ರಾಹಕರ ಡ್ರಾಯಿಂಗ್ ರೂಮಿನೊಳಕ್ಕೆ ತೆಗೆದುಕೊಂಡು ಹೋಗುವ ಹೆದ್ದಾರಿಗಳೆಂದರೆ ಈ ಮಾಧ್ಯಮಗಳು ಮಾತ್ರ. ಮುದ್ರಣ ಮಾಧ್ಯಮವೂ ಸೇರಿದಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳು, ಹೈಟೆಕ್ ಆದ ಇಂಟರ್ನೆಟ್ ಮಾಧ್ಯಮವೂ ಸೇರಿದಂತೆ ಎಲ್ಲ ಮಾಧ್ಯಮಗಳು ಈ ಕೆಲಸವನ್ನು ಚಾಚು ತಪ್ಪದಂತೆ ಮಾಡುತ್ತಿವೆ. ಇದಕ್ಕೆಲ್ಲ ಕಾರಣವೆಂದರೆ ಮಾರುಕಟ್ಟೆ ಕೇಂದ್ರಿತ ವ್ಯಾಪಾರಿ ವ್ಯವಸ್ಥೆಯೇ ಆಗಿದೆ.
ಇಡೀ ಬದುಕು ವ್ಯಾಪಾರೀಕರಣಗೊಂಡ ಇಂದಿನ ಸಮಾಜದಲ್ಲಿ ಸಂಪೂರ್ಣ ಅಸಮಾನತೆ ತಾಂಡವವಾಡುತ್ತಿದೆ. ಈ ಕಾರಣದಿಂದಾಗಿ ಮನುಷ್ಯ ಇಂದು ಸಂಪೂರ್ಣವಾಗಿ ಯಂತ್ರದಂತಾಗಿದ್ದಾನೆ. ಅವನ ಹಾವಭಾವಗಳು, ನಗು, ವಿದ್ಯೆ, ವಿನಯ, ವಿಧೇಯತನ, ಕೌಶಲಗಳು, ಬುದ್ಧಿಶಕ್ತಿ- ಎಲ್ಲವನ್ನು ವಿನಿಯೋಗಿಸುತ್ತ, ಅವುಗಳನ್ನೆಲ್ಲ ಬಂಡವಾಳಶಾಹಿ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಿದ್ದಾನೆ. ನಕ್ಕರೂ, ಕೈ ಮುಗಿದರೂ, ವಿಧೇಯತನ ತೋರಿಸಿದರೂ, ಕೆಲಸ ಮಾಡಿದರೂ ಲಾಭವಾಗಬೇಕು- ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮನುಷ್ಯನೂ ಯಂತ್ರದಂತೆ ಹಗಲಿರುಳು ಬಳಕೆಯಾಗುತ್ತಿದ್ದಾನೆ.
ಇಂಥ ಪರಿಸ್ಥಿತಿ ಇರುವಾಗ ಪತ್ರಿಕೋದ್ಯಮದಂಥ ಪ್ರಮುಖ ಅಂಗವೊಂದು ಗ್ಲೋಬಲ್ ಪಾಲಿಟಿಕ್ಸ್ನ ಒಂದು ಭಾಗವಾಗಿ, ಅದರ ಕೈಗೊಂಬೆಯಾಗಿ ಹೋಗಿದೆ ಮತ್ತು ಗ್ಲೋಬಲ್ ಪಾಲಿಟಿಕ್ಸ್ ಅನ್ನು ಪ್ರೂವ್ ಮಾಡುವ ಅಂಗವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಮೊದಲು ಪತ್ರಿಕೋದ್ಯಮ ಜನ ಕೇಂದ್ರಿತವಾಗಿತ್ತು. ಇಂದು ಅದರ ಬದಲಾಗಿ ’ಶಕ್ತಿ’ ಕೇಂದ್ರಿತವಾಗಿದೆ. ಯಾವುದೇ ಒಂದು ಪರ್ಟಿಕ್ಯುಲರ್ ಇಂಟರೆಸ್ಟ್ ಅನ್ನು ಬಿಂಬಿಸುವತ್ತ ವಾಲಿದ್ದು, ಅಲ್ಲಿ ಬಹುಜನ ಹಿತಾಯ; ಬಹುಜನ ಸುಖಾಯ (ಇಲ್ಲಿ ಬಹುಜನ ಎಂದರೆ, ಬಹುಜನ ಸಮಾಜ ಪಾರ್ಟಿ ಅಲ್ಲ ಎಂಬುದು ನೆನಪಿರಲಿ) ಎಂಬುದು ಸಂಪೂರ್ಣವಾಗಿ ಮಾಯವಾಗಿದೆ.
ಸಮಗ್ರತೆ ಎಂಬುದು ಇಂದಿನ ಮಾಧ್ಯಮದಲ್ಲಿ ಹೋಗಿಯೇ ಬಿಟ್ಟಿದೆ. ಇಂದಿನ ಮಾಧ್ಯಮ ಯಾವುದನ್ನೂ ಸಮಗ್ರವಾಗಿ ನೋಡುವುದಿಲ್ಲ. ಪೆಟ್ರೋಲ್, ಡೀಸಲ್ ಬೆಲೆಗಳನ್ನೇ ತೆಗೆದುಕೊಂಡರೆ, ’ಇಡೀ ಜಗತ್ತು ಪೆಟ್ರೋಲ್ ಮೇಲೆಯೇ ಯಾಕೆ ನಿಂತಿರಬೇಕು?’ ಎಂದು ಯಾರೂ ಯೋಚಿಸುವುದಿಲ್ಲ. ಅಥವಾ ಹಾಗೆ ಯಾರಾದರೂ ಯೋಚನೆ ಮಾಡಿದಲ್ಲಿ, ಮತ್ತದನ್ನು ಬರೆದಲ್ಲಿ, ಎಲ್ಲಿಯೋ ಮೂಲೆಯಲ್ಲಿ ಮೂರು ಪ್ಯಾರಾ ಪ್ರಕಟಿಸಿ ಕೈ ತೊಳೆದುಕೊಳ್ಳಲಾಗುತ್ತದೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ೪೦ ಜನ ರೈತರು ಆತ್ಯಹತ್ಯೆ ಮಾಡಿಕೊಂಡರು- ಎಂದು ವರದಿ ಮಾಡಲಾಗುತ್ತದೆಯೇ ಹೊರತು, ಕಳೆದ ೧೦ ವರ್ಷಗಳ ಅವಧಿಯಲ್ಲಿ ೧ ಲಕ್ಷ ೭೫ ಸಾವಿರದಷ್ಟು ರೈತರು ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆಲ್ಲ ಮೂಲ ಮತ್ತು ಮುಖ್ಯವಾದ ಕಾರಣ ೧೯೯೦ರಿಂದಲೇ ದೇಶವು ಅನುಸರಿಸಿಕೊಂಡು ಬರುತ್ತಿರುವ ಉದಾರೀಕರಣ ನೀತಿಗಳೇ ಆಗಿದೆ ಎಂಬುದರ ಬಗ್ಗೆ ಪಿ. ಸಾಯಿನಾಥ್ರಂಥ ಕೆಲವೇ ಕೆಲವು ಪತ್ರಕರ್ತರನ್ನು ಬಿಟ್ಟರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ನಮ್ಮ ಫೋರ್ತ್ ಎಸ್ಟೇಟ್- ಹೀಗೆ, ಒಂದು ವಿಚಾರವನ್ನು ಸಮಗ್ರವಾಗಿ ನೋಡುವ ಬದಲಾಗಿ, ಪ್ರತಿಯೊಂದು ಅಂಶವನ್ನು ಒಡೆದು ಒಡೆದು ನೋಡುತ್ತಿದೆ. ಸಮಗ್ರವಾಗಿ ನೋಡುವ ಬದಲಾಗಿ ಒಡೆದು ಒಡೆದು ನೋಡಿದಾಗ ದಿಕ್ಕು ತಪ್ಪಿ ಬಿಡುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ಏನು ಹೇಳುತ್ತವೆಯೋ ಅದನ್ನೇ ನಾವುಗಳು ಬೇರೆ ಬೇರೆ ರೂಪದಲ್ಲಿ ಪ್ರಚಾರ ಮಾಡುತ್ತಿರುತ್ತವೆ. ಉದಾಹರಣೆಗೆ ಈಗ ನ್ಯೂಕ್ಲಿಯರ್ ಒಪ್ಪಂದದ ವಿಚಾರದಲ್ಲಿ ಇದೇ ಆಗುತ್ತಿರುವುದು!
ನ್ಯೂಕ್ಲಿಯರ್ ಎನರ್ಜಿಯನ್ನು ಅಮೆರಿಕದಿಂದ ಪಡೆದುಕೊಂಡರೆ ಒಳ್ಳೆಯದೋ? ಫ್ರಾನ್ಸ್ನಿಂದ ಪಡೆದರೆ ಒಳ್ಳೆಯದೋ? ನ್ಯೂಕ್ಲಿಯರ್ ಎನರ್ಜಿ ಬೇಕೆ? ಬೇಡವೇ? ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಂಡರೆ, ದೇಶಕ್ಕೆ ಏನು ಲಾಭ? ಎಷ್ಟು ಲಾಭ? ಎಂಬಂಥ ರೀತಿಯಲ್ಲಿ ಪ್ರತಿಯೊಂದು ಪ್ರಶ್ನೆಯನ್ನು ಕೇಳಿ- ಅದಕ್ಕೆ ಬಂದ ಮತ್ತು ಆಯ್ದ ವಿಚಾರಗಳನ್ನೇ ದೊಡ್ಡದಾಗಿ ಬಿಂಬಿಸಲಾಗುತ್ತದೆ. ಇಡೀ ಮಾಧ್ಯಮ ಕ್ಷೇತ್ರವನ್ನು ಕಾಣದ ಕೈಗಳು ಎಲ್ಲಿಂದಲೋ ಕಂಟ್ರೋಲ್ ಮಾಡುತ್ತಿರುವುದು ಎದ್ದು ಕಾಣುತ್ತದೆ.
ಗ್ಲೋಬಲ್ ಪಾಲಿಟಿಕ್ಸ್ನ ಒಂದು ಭಾಗವಾಗಿ, ಅದರ ದಾಳವಾಗಿ, ಅದು ನಡೆಸುವ ಆಟದ ಕಾಯಿಯಾಗಿ ಫೋರ್ತ್ ಎಸ್ಟೇಟ್ ತುಂಬ ಚೆನ್ನಾಗಿ ಬಳಕೆಯಾಗುತ್ತಿದೆ. ಅಮೆರಿಕ, ಇಂಗ್ಲೆಂಡ್ನ ಸುದ್ದಿಗಳು ನಮ್ಮಲ್ಲಿ ಬಂದಷ್ಟು ನಾರ್ವೆ, ಜಪಾನ್, ಅರಬ್ ದೇಶಗಳ ಸುದ್ದಿಗಳು ಪ್ರಕಟವಾಗುವುದಿಲ್ಲ. ಅಮೆರಿಕದ ನಟಿಯೊಬ್ಬಳ ನಾಯಿ ಯಾವುದೋ ವಿಮಾನದ ಕ್ಯಾಬಿನ್ ಕ್ರ್ಯೂಗೆ ಕಚ್ಚಿದರೆ, ನಮ್ಮ ದೇಶದಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಅದಕ್ಕೆ ಕಾಲು ಪುಟದಷ್ಟು ದೊಡ್ಡದಾದ ಆ ನಟಿಯ ಚಿತ್ರ ಹಾಕಿ, ರೀಮುಗಟ್ಟಲೇ ಬರೆಯುತ್ತಾರೆ. ಅದೇ ಸೌದಿ ಅರೇಬಿಯಾದಲ್ಲಿ ೫೦ ಜನ ಮುಗ್ದ ಜನರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದರೆ, ಅದು ಸುದ್ದಿಯೇ ಆಗುವುದಿಲ್ಲ.
ಶಿಲ್ಪಾ ಶೆಟ್ಟಿಗೆ ಅಮೆರಿಕದ ಚಿತ್ರನಟ ಮುತ್ತು ಕೊಟ್ಟರೆ ನಮ್ಮ ಮಾಧ್ಯಮಗಳಿಗೆ ಅದು ದೊಡ್ಡ ಸುದ್ದಿ. ಇಡೀ ದಿನ ಅದನ್ನೇ ತೋರಿಸಲಾಗುತ್ತದೆ. ಆದರೆ, ಅದೇ ಶುಭಾ ಮುದುಗಲ್, ದೆಹಲಿಯ ನೆಹರು ಪಾರ್ಕಿನಲ್ಲಿ ಸುಶ್ರಾವ್ಯವಾಗಿ ಎರಡು ತಾಸು ಸಂಗೀತ ಕಚೇರಿ ನಡೆಸಿಕೊಟ್ಟರೆ, ಅದರ ಸುದ್ದಿ ನಮ್ಮ ಮಾಧ್ಯಮಗಳಲ್ಲಿ ಅಪ್ಪಿ ತಪ್ಪಿಯೂ ಸುಳಿಯುವುದಿಲ್ಲ. ಯಾಕೆಂದರೆ, ಶುಭಾ ಮುದುಗಲ್ ಸಂಗೀತ ಕಚೇರಿ ಕಾರ್ಯಕ್ರಮ ಪ್ರಸಾರ ಮಾಡಿದರೆ, ಅದು ಅವರಿಗೆ ಟಿಆರ್ಪಿ ಗಳಿಸಿಕೊಡುವುದಿಲ್ಲ. ಟಿಆರ್ಪಿ ಬರದೇ ಹೋದರೆ, ಚಾನಲ್ಗೆ ಲಾಭವಾಗುವುದಿಲ್ಲ. ಲಾಭವಾಗದೇ ಹೋದರೆ, ಹಣ ಹಾಕಿದ ಧಣಿಯ ದುಡ್ಡು ಮರಳಿ ಬರುವುದಿಲ್ಲ. ಹೀಗಾಗಿ ಆತ ಹಾಕಿದ ಹಣ ಮರಳಿ ಬರಬೇಕು ಎಂದರೆ, ಶಿಲ್ಪಾ ಶೆಟ್ಟಿಯ ಕಿಸ್ ಪ್ರಕರಣವೇ ಆಗಬೇಕು.
ಪ್ರತಿದಿನ ನಮಗೆ ಸೆನ್ಸೇಷನ್ ಸುದ್ದಿಯೇ ಬೇಕು ಎನ್ನುತ್ತವೆ ಟಿಆರ್ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್) ಪೀಡಿತ ಸುದ್ದಿ ಮಾಧ್ಯಮಗಳು. ಪ್ರತಿ ದಿನ ಶಿಲ್ಪಾ ಶೆಟ್ಟಿಗೆ ಯಾವನಾದರೂ ಕಿಸ್ ಕೊಡಬೇಕು; ಪ್ರತಿದಿನ ಯಾವುದಾದರೂ ಚುನಾವಣಾ ಪ್ರಚಾರ ಸಭೆಯಲ್ಲಿ ನಂಗಾ ನಾಚ್ ನಡೆಯಲೇ ಬೇಕು; ಪ್ರತಿದಿನ ಶಾಸಕರ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಬೇಕು, ಪ್ರತಿದಿನ ಆರುಷಿ-ಹೇಮರಾಜ್ನಂಥವರನ್ನು ಯಾರಾದರೂ ನಿಗೂಢವಾಗಿ ಕೊಲೆ ಮಾಡಬೇಕು ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಇದರ ಜೊತೆಗೆ ಪತ್ರಿಕೋದ್ಯಮದಲ್ಲಿ ಅಕೌಂಟಿಬಿಲಿಟಿ ಕೂಡ ಹೊರಟು ಹೋಗುತ್ತಿದೆ. ಅಕೌಂಟಬಿಲಿಟಿ ಪ್ರಶ್ನೆ ಬಂದಾಗ ಪತ್ರಿಕೋದ್ಯಮಿಗಳು ಕೊಸರಿಕೊಳ್ಳುತ್ತಾರೆ. ನಾವೂ ಕೂಡ ಅಕೌಂಟೇಬಲ್ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಒಟ್ಟಾರೆಯಾದ ಸಾಮಾನ್ಯವಾದ ಅರ್ಥದಲ್ಲಿ ಹೇಳಬೇಕೆಂದರೆ, ಮಾನವೀಯತೆ ಮಾಯವಾಗುತ್ತಿದೆ. ಈ ಮೊದಲು, ಪತ್ರಿಕೋದ್ಯಮಿಗಳೆಂದರೆ, ತುಂಬ ಬುದ್ಧಿವಂತರು, ಸಾಕಷ್ಟು ಪುಸ್ತಕಗಳನ್ನು ಓದಿಕೊಂಡವರು, ಅತ್ಯಂತ ಅಧ್ಯಯನಶೀಲರು, ಯಾವುದೇ ಒಂದು ವಿಚಾರದ ಬಗ್ಗೆ ಕರಾರುವಕ್ಕಾಗಿ ಮಾತನಾಡುವವರು, ಇಂಟಲೆಕ್ಚುವಲ್ಸ್ ಎಂದೆಲ್ಲ ಭಾವಿಸಲಾಗುತ್ತಿತ್ತು. ಅಂಥ ಇಂಟಲೆಕ್ಚುವಲ್ಸ್ ಈಗ ಬೆರಳೆಣಿಕೆಯಷ್ಟು ಜನ ಸಿಗುತ್ತಾರೆ. ಒಟ್ಟಾರೆಯಾಗಿ ಮಾನವೀಯತೆ ಮರೆಯಾಗಿರುವುದರಿಂದ ಯಾವುದೇ ಪತ್ರಕರ್ತರನ್ನು ಮಾತನಾಡಿಸುವುದು ಕಷ್ಟ. ತುಂಬಾ ನ್ಯಾರೋ ಆಗಿ ಯೋಚಿಸುವವರ ಸಂಖ್ಯೆ ಹೆಚ್ಚಾಗಿದೆ.
ಇದಕ್ಕೆಲ್ಲ ಪರಿಹಾರಗಳೆಂದರೆ,
ಮುಖ್ಯವಾಗಿ ಪತ್ರಿಕೋದ್ಯಮವು ಇನ್ ಆಲ್ ಸೆನ್ಸ್ ಅತ್ಯುತ್ತಮ ’ಫೋರ್ತ್ ಎಸ್ಟೇಟ್’ ಆಗಿ ಹೊರ ಹೊಮ್ಮಬೇಕು. ಅದೇ ಅತ್ಯಂತ ದೊಡ್ಡ ಪರಿಹಾರವಾಗಿ ಬಿಡುತ್ತದೆ.
ಪತ್ರಿಕೋದ್ಯಮಕ್ಕೂ ಬದ್ಧತೆ ಇದೆ, ಅಕೌಂಟಬಿಲಿಟಿ ಇದೆ ಎಂಬುದು ಸಾಬೀತಾಗಬೇಕು. ಮಾಧ್ಯಮ ಕ್ಷೇತ್ರದಲ್ಲಿ ವೆಲ್ ರೆಡ್, ವೆಲ್ ನಾಲೇಡ್ಜಬಲ್ ಆದವರ ಸಂಖ್ಯೆ ನೂರಕ್ಕೆ ನೂರರಷ್ಟು ಆಗಬೇಕು. ಕೇವಲ ಟಿಆರ್ಪಿ ಹಿಂದೆ ಬೀಳದೇ, ಮಾನವೀಯತೆಯೇ ಮೇಲುಗೈ ಸಾಧಿಸಬೇಕು. ಎಲ್ಲೋ ಕುಳಿತ ಯಾರೋ ನಮ್ಮ ಮಾಧ್ಯಮವನ್ನು ಕಂಟ್ರೋಲ್ ಮಾಡದೇ, ನಮ್ಮಗಳ ಮಾನವೀಯತೆಯೇ ಅವುಗಳನ್ನು ನಿಯಂತ್ರಿಸಬೇಕು. ಮುಖ್ಯವಾಗಿ ಮಾರ್ಕೆಟ್ ಎಕಾನಮಿಯ ದಾಳದಂತೆ ಬಳಕೆಯಾಗುತ್ತಿರುವುದರಿಂದ ಮಾಧ್ಯಮಗಳು ಹೊರ ಬರಬೇಕು.
ಬಹುಜನ ಹಿತಾಯ, ಬಹುಜನ ಸುಖಾಯ ಎಂಬುದು ಇಡೀ ಮಾಧ್ಯಮ ಕ್ಷೇತ್ರದ ಮೂಲ ಮಂತ್ರವಾಗಬೇಕು.
* * *

ಭಯೋತ್ಪಾದನೆ ಎಂಬ ದೆವ್ವದ ಮನೆ
ಭಯೋತ್ಪಾದನೆಯೆಂಬ ದೆವ್ವದ ಮನೆಯಲ್ಲಿದ್ದೇವೆ; ಎದುರಿಸುವ ಮುತ್ಸದ್ದಿತನವೆಲ್ಲಿ?
ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಹೊಗಳುವ ’ಸಿಂಗ್ ಈಸ್ ಕಿಂಗ್; ಸಿಂಗ್ ಈಸ್ ಕಿಂಗ್’ ಎಂಬ ಹಾಡು ಈಗ ಎಲ್ಲೆಡೆ ಕೇಳಿ ಬರುತ್ತಿದೆ.ಕಿಂಗ್ ಸಿಂಗ್ರ ಆಡಳಿತದ ಅವಧಿಯ ರಿಪೋರ್ಟ್ ಕಾರ್ಡ್ ಇದು: ೨೦೦೫ರಿಂದ ಇಲ್ಲಿಯವರೆಗಿನ ಭಯೋತ್ಪಾದನಾ ಹತ್ಯಾಕಾಂಡಗಳಲ್ಲಿ ಮಡಿದವರ ಸಂಖ್ಯೆ (ಬೆಂಗಳೂರು ಮತ್ತು ಅಹ್ಮದಾಬಾದ್ ಸೇರಿ) ೫೪೭ ಆಗುತ್ತದೆ. ಅಂದರೆ, ಕೇವಲ ಮೂರು ವರ್ಷಗಳ ಅವಧಿಯಲ್ಲಿ ಈ ದೇಶದಲ್ಲಿ ಐದೂವರೆ ನೂರು ಜನ ಅಮಾಯಕರ ಬಲಿ! ಅದಕ್ಕಿಂತ ಮೂರು ನಾಲ್ಕು ಪಟ್ಟು ಜನರು ಅರ್ಧ ಕೊಲೆಯಾಗಿದ್ದಾರೆ. ಅಂದರೆ ಅವರು ಇನ್ನರ್ಧ ಜೀವಂತವಾಗಿದ್ದರೂ, ಇತರರಂತೆ ಸಾಮಾನ್ಯ ಬದುಕು ಸಾಗಿಸಲು ಸಾಧ್ಯವಿಲ್ಲ. ಬದುಕಿದ್ದೂ ಸತ್ತವರವರು!ಇದು ನಿಜಕ್ಕೂ ಸರ್ಕಾರ ಮಾಡಿದ ’ಅಭಿವೃದ್ಧಿ’ಯೇ ಸರಿ.
ನಿಜಕ್ಕೂ ’ಸಿಂಗ್ ಈಸ್ ಕಿಂಗ್’!. ೨೦೦೫ರ ಅಕ್ಟೋಬರ್ದಿಂದ ಈಚೆಗೆ ದೆಹಲಿಯ ಸರೋಜಿನಿ ಮಾರುಕಟ್ಟೆಯಲ್ಲಿ, ವಾರಾಣಸಿಯಲ್ಲಿ, ಮುಂಬೈನ ರೈಲು ಬೋಗಿಗಳಲ್ಲಿ, ಮಾಲೆಗಾಂವದಲ್ಲಿ, ಸಂಜೋತಾ ಎಕ್ಸ್ಪ್ರೆಸ್ನಲ್ಲಿ, ಎರಡು ಸಲ ಹೈದ್ರಾಬಾದ್ನ ಧಾರ್ಮಿಕ ಪ್ರದೇಶಗಳಲ್ಲಿ, ಉತ್ತರ ಪ್ರದೇಶದ ಕೋರ್ಟ್ಗಳಲ್ಲಿ, ರಾಂಪುರದ ಸಿಆರ್ಪಿಎಫ್ ಕ್ಯಾಂಪ್ಗಳಲ್ಲಿ- ಜೈಪುರದಲ್ಲಿ- ಇದೀಗ ಅಹ್ಮದಾಬಾದ್ ಮತ್ತು ಬೆಂಗಳೂರುಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳ ಹಿಂದಿನ ಉದ್ದೇಶಗಳೇನು? ಎಂದು ಹುಡುಕುತ್ತ ಹೋದರೆ ದಿಕ್ಕು ತಪ್ಪಿ ಹೋದೀತು. ಆದರೆ, ಅವುಗಳು ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡುವಲ್ಲಿ; ಭೀತಿ ಹುಟ್ಟಿಸುವಲ್ಲಿ; ಇಡೀ ವ್ಯವಸ್ಥೆಯನ್ನು ಅತಂತ್ರ ಮಾಡುವಲ್ಲಿ ಯಶಸ್ವಿಯಾದವು ಮತ್ತು ಇಡೀ ಸರ್ಕಾರಿ ಯಂತ್ರ; ಕೋಟ್ಯಂತರ ರೂ.ಗಳ ಯೋಜನೆಗಳು; ನಮ್ಮ ರಕ್ಷಣಾ ತಂತ್ರಗಳು; ಪೊಲೀಸ್ ವ್ಯವಸ್ಥೆ; ಬೇಹುಗಾರಿಕೆ; ತನಿಖೆ; ವಿಚಾರಣೆ- ಹೀಗೆ ಎಲ್ಲವನ್ನೂ ಅಪಹಾಸ್ಯ ಮಾಡಿದವು. ಮಾಡುತ್ತಲೇ ಇವೆ. ಈ ಎಲ್ಲವುಗಳ ಅಸ್ತಿತ್ವ ಇದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿವೆ. ಇದು ಭಯೋತ್ಪಾದಕರ ಶಕ್ತಿ (ಎನ್ನಬೇಕೆ?), ರಾಜ್ಯಶಕ್ತಿ (ಪವರ್ ಆಫ್ ದಿ ಸ್ಟೇಟ್)ಯ ಅಸಮರ್ಥತೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ!೨೦೦೫ರಿಂದೀಚೆಗೆ ನಡೆದ ಭಯೋತ್ಪಾದಕ ಘಟನೆಗಳಲ್ಲಿ ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ; ಎಲ್ಲೋ ಒಬ್ಬ ಅಬ್ದುಲ್ ಹಲೀಂನನ್ನು ಬಂಧಿಸಿರುವುದನ್ನು ಬಿಟ್ಟರೆ, ಯಾರೋ ಸೂಟ್ಕೇಸ್ ಮಾರಿದವನನ್ನು, ಸೈಕಲ್ ಮಾರಿದ ಅಂಗಡಿ ಮಾಲೀಕರನ್ನು ನಮ್ಮ ಘನವೆತ್ತ ಪೊಲೀಸರು ಹಿಡಿದು ತಂದಿದ್ದಾರೆ. ಅಂಥವರನ್ನಿಟ್ಟುಕೊಂಡು ತನಿಖೆ, ವಿಚಾರಣೆ ನಡೆಯುತ್ತಿದೆ. ಆದರೆ, ಅದರ ಹಿಂದಿರುವ ಮಾಸ್ಟರ್ಮೈಂಡ್ಗಳು ಎಲ್ಲೋ ಅಡಗಿಕೊಂಡಿದ್ದಾರೆ (ದೊಡ್ಡಣ್ಣ ಅಮೆರಿಕದ್ದೂ ಇದೇ ಸ್ಥಿತಿ! ಅಂದಮೇಲೆ ನಮ್ಮಂಥವರದ್ದು ಯಾವ ಲೆಕ್ಕ?).
ಅವರೇನು ಮಾಡುತ್ತಿದ್ದಾರೆ?:
ಈ ಪರಿಯಾಗಿ ದೇಶವೇ ಭಯದ ದೆವ್ವಗಳ ಮನೆಯಲ್ಲಿ ಹೊಕ್ಕು ಕುಳಿತಿದ್ದರೆ, ನಮ್ಮ ದೇಶದ ಮಹೋನ್ನತ ನಾಯಕರೇನು ಮಾಡುತ್ತಿದ್ದಾರೆ? ಅವರ ಮಾತುಗಳನ್ನು ಕೇಳಿದರೆ, ಅವರಾಡುವುದನ್ನು ನೋಡಿದರೆ ಎಂಥವರಿಗೂ ಅಸಹ್ಯ ಹುಟ್ಟುತ್ತದೆ. ಯಾರಿಗೂ ಭಯೋತ್ಪಾದನೆ ಎಂಬ ಮಹಾಮಾರಿಯನ್ನು ಬಡಿದೋಡಿಸುವ ಬಗ್ಗೆ ಕಾಳಜಿಯೇ ಇಲ್ಲ. ಎಲ್ಲರೂ ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ಯಾರಲ್ಲೂ ಮುತ್ಸದ್ದಿತನ ಕಾಣುತ್ತಿಲ್ಲ. ದೂರದೃಷ್ಟಿತ್ಚ ವಿಜೃಂಭಿಸುತ್ತಿಲ್ಲ. ಯಾರೂ ಭಯೋತ್ಪಾದನೆಯ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿದ್ದೇವೆ; ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದೇವೆ ಎಂದು ಎದೆತಟ್ಟಿಕೊಂಡು ಹೇಳುವ ಸ್ಥಿತಿಯಲ್ಲಿ ಇಲ್ಲ.
ನಾವು ಮೊದಲೇ ಗುಜರಾತ್ ಮುಖ್ಯಮಂತ್ರಿಗೆ ಎಚ್ಚರಿಕೆ ನೀಡಿದ್ದೆವು. ಆದರೆ, ಅವರು ನಿರ್ಲಕ್ಷ್ಯ ಮಾಡಿದರು. ಹೀಗಾಗಿ ದುರಂತ ಸಂಭವಿಸಿತು ಎಂದು ಕಾಂಗ್ರೆಸ್ ಮುಖಂಡರು ಹೊಡೆದುಕೊಳ್ಳುತ್ತಿದ್ಧಾರೆ. ನಿಮಗೆ ಮೊದಲೇ ಗೊತ್ತಿದ್ದರೆ ಯಾಕೆ ತಡೆಯಲಿಲ್ಲ? ಯಾಕೆ ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳಲಿಲ್ಲ? ಇಡೀ ಸೇನೆ ನಿಮ್ಮ ಕೈಯಲ್ಲೇ ಇದೆಯಲ್ಲ? ಯಾಕೆ ಸೇನೆಯನ್ನು ನಿಯೋಜನೆ ಮಾಡಲಿಲ್ಲ?
ನಮ್ಮ ಪ್ರಧಾನಿಗಳಿಗೋ ಎಲ್ಲವೂ ಅಮೆರಿಕದ ಮೂಸೆಯಿಂದಲೇ ಬರಬೇಕು. ಈಗಾಗಲೇ ಅವರು ನಮಗೆ ಅಮೆರಿಕನರಂತೆ ಪ್ಯಾಕೇಜ್ಡ್ ಆಹಾರವನ್ನೇ ತಿನ್ನಲು ಕೈ ಹಿಡಿದು ಕಲಿಸಿದ್ದಾರೆ. ಅವರಂತೆ ತಲೆಗೊಂದು ಕಾರು ಇಟ್ಟುಕೊಂಡು ಓಡಾಡಲು ಹೇಳಿಕೊಟ್ಟಿದ್ದಾರೆ. ನಿಮ್ಮ ಜಮೀನನ್ನೆಲ್ಲ ದೊಡ್ಡ ದೊಡ್ಡ ಕಂಪೆನಿಗಳಿಗೆ ಮಾರಿ ಬಿಡಿ; ಆ ಕಂಪೆನಿಗಳವರು ಅಲ್ಲಿ ದೊಡ್ಡ ಯಂತ್ರಗಳನ್ನಿಟ್ಟು ಹೆಚ್ಚು ಬೆಳೆ ತೆಗೆಯುತ್ತಾರೆ; ಯಾಕೆ ಚಿಂತೆ ಮಾಡುತ್ತೀರಿ? ಅವರ ಕೈ ಕೆಳಗೆ ಕೆಲಸ ಮಾಡಿರಿ; ಅವರು ಕೊಟ್ಟ ಸಂಬಳ ತೆಗೆದುಕೊಂಡು ಆರಾಮಾಗಿರಿ ಎಂದು ಹೇಳುತ್ತ- ರೈತರ ಜಮೀನುಗಳನ್ನು ನಿಧಾನಕ್ಕೆ ಒಬ್ಬೊಬ್ಬರೇ ಒಡೆಯರ ಕೈಗೆ ರವಾನಿಸುತ್ತಿದ್ದಾರೆ. ಜಮೀನು ಮಾರಿದ ರೈತರು ತಮ್ಮ ಹೊಲಗಳಲ್ಲಿಯೇ ಬೇರೊಬ್ಬರ ಕೈಯಾಳಾಗಿ ದುಡಿಯಲು ಹೋಗಬೇಕು. ಭಾರತದ ಎಲ್ಲ ಕ್ಷೇತ್ರಗಳಲ್ಲಿಯೂ ವಿದೇಶಿಯರು ಬಂದು ಕೂರಲು ಅನುಕೂಲವಾಗಿದೆ. ಅದಕ್ಕೆ ರತ್ನಗಂಬಳಿ ಹಾಸಿ ಅವರನ್ನೆಲ್ಲ ಕರೆತಂದಿದ್ದಾರೆ. ಪ್ರತಿಯೊಬ್ಬರ ಕೈಗೊಂದು ಪಾನೀಯ ಬಾಟಲು, ನೋಡಲೊಂದು ಟಿ-೨೦ ಕ್ರಿಕೆಟ್ ಮ್ಯಾಚ್ ಕೊಟ್ಟು ಬಿಟ್ಟಿದ್ದಾರೆ.
ಇಂಥ ಪ್ರಧಾನಿಗಳು ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ- ಅಮೆರಿಕದ ಮಾದರಿಯಲ್ಲಿಯೇ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ರಚಿಸಬೇಕು ಎಂದು ಯೋಚಿಸಿದ್ದಾರೆ. ತಮ್ಮ ಮಾದರಿ ದೇಶವಾದ ಅಮೆರಿಕದಲ್ಲಿ ಅಲ್ಲಿನ ಎಫ್ಬಿಐಗೆ, ಸೆಪ್ಟೆಂಬರ್ ೧೧, ೨೦೦೧ರ ಭಯೋತ್ಪಾದಕ ಘಟನೆಯ ಮಾಸ್ಟರ್ಮೈಂಡ್ ಒಸಾಮಾ ಬಿನ್ ಲ್ಯಾಡೆನ್ ಇದುವರೆಗೂ ಸಿಕ್ಕಿಲ್ಲ. ಅದು ಕಣ್ಣ ಮುಂದಿದ್ದರೂ ಅವರು ಈ ಚಿಂತನೆ ನಡೆಸಿದ್ದಾರೆ.ವಿಶ್ವದಲ್ಲಿ ಎಲ್ಲೆಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆಯೋ ಅಲ್ಲೆಲ್ಲ- ಈ ಭಯೋತ್ಪಾದನೆಗೆ ಕಾರಣವೇನು? ಎಂದು ಹುಡುಕುತ್ತಾ ಹೋದರೆ- ಒಂದು ಜನಾಂಗದ ಹತಾಶೆಯೇ ಮುಖ್ಯ ಕಾರಣ ಎಂಬುದು ಸಿದ್ಧವಾಗುತ್ತದೆ. ಈ ಹತಾಶೆಗೆ ಐತಿಹಾಸಿಕ ಕಾರಣವಿದೆ.
ಹಿಂದೆಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಕಾರಣಗಳಿಂದ ವಿಶ್ವದ ಎರಡು ಪ್ರಮುಖ ಧರ್ಮಗಳಲ್ಲಿ- ಒಂದು ಇನ್ನೊಂದನ್ನು ಮೂಲೆಗೊತ್ತುತ್ತ ಬಂದಿತು. ಹೀಗೆ ಮೂಲೆಗೊತ್ತಿ ಆ ಧರ್ಮೀಯರನ್ನು ಸಂಪೂರ್ಣ ಮೂಲೆಗುಂಪು ಮಾಡಲು ಆ ಇನ್ನೊಂದು ದೊಡ್ಡ ಧರ್ಮಕ್ಕೆ ಸಾಧ್ಯವಾಗಲಿಲ್ಲ. ಹಾಗೆ ಮೂಲೆಗೆ ತಳ್ಳಲ್ಪಟ್ಟವರಿಗೆ ಅಲ್ಲಿ ಕುಡಿಯಲು ನೀರು ಸಿಗದಿದ್ದರೂ ತೈಲ ಬಾವಿಗಳು ಸಿಕ್ಕವು. ಚಿನ್ನದ ಗಣಿಯೇ ಸಿಕ್ಕಂತಾಯಿತು. ತೈಲದ ಹರಿವಿನಿಂದ ಝಣಝಣದ ರೂಪಾಯಿ ಕುಣಿಯತೊಡಗಿತು. ಅದರಿಂದ ಎಲ್ಲವನ್ನೂ ಕೊಂಡು ಕೊಳ್ಳತೊಡಗಿದರು. ಆದರೆ, ಅಮೆರಿಕದಂಥ ದುಷ್ಟ ದೇಶಗಳು ಆ ತೈಲದ ಮೇಲೆ ಕೆಂಗಣ್ಣು ಬೀರಿದವು. ಶೀತಲ ಯುದ್ಧಗಳು ನಡೆದವು. ಶೋಷಣೆ ಮುಂದುವರಿಯಿತು. ತೈಲದ ರಾಜಕೀಯದಲ್ಲಿ ಕ್ರೌರ್ಯ ಮೆರೆಯಿತೇ ಹೊರತು ಮಾನವೀಯತೆಯಲ್ಲ. ಎಲ್ಲೋ ದೂರದಲ್ಲಿ ಕುಳಿತು ತಮ್ಮ ಸುಖಕ್ಕಾಗಿ ಇನ್ನೆಲ್ಲಿಯೋ ಮರಳುಗಾಡಿನಲ್ಲಿ ಇರುವವರನ್ನು ಶೋಷಿಸಲು ಅಮೆರಿಕದಂಥ ದೇಶಗಳು ಹಿಂದೆ ನೋಡಲಿಲ್ಲ. (ಸಾಲದ್ದಕ್ಕೆ ಇನ್ನೊಂದು ಕಡೆಯಲ್ಲಿ ಬ್ರಿಟಿಷ್ರಂತವರು ವಿಶ್ವದ ಬಹುತೇಕ ದೇಶಗಳ ಮೇಲೆ ತಮ್ಮ ಸಾರ್ವಭೌಮತ್ವ ಸ್ಥಾಪಿಸಿ, ಸ್ಥಳೀಯರ ಹಕ್ಕುಗಳ ಮೇಲೆ ಹದ್ದಾಗಿ ಕುಕ್ಕಿದರು. ಸ್ವಾತಂತ್ರ್ಯ ಕಸಿದರು).
ತೈಲ ದೇಶಗಳ ಮೇಲಿನ ಹಿಡಿತ ಸಾಧಿಸುವ ಹಠಕ್ಕೆ ಬಿದ್ದು, ಅಮೆರಿಕ ಸಾಕಷ್ಟು ತಪ್ಪುಗಳನ್ನು ಮಾಡತೊಡಗಿತು. ಕುವೈತ್ ಯುದ್ಧ, ಇರಾಕ್ ಯುದ್ಧ, ಸದ್ದಾಂ ಗಲ್ಲು- ಇವು ಕೆಲವು ಉದಾಹರಣೆಗಳು ಮಾತ್ರ. ಪ್ರಜಾಪ್ರಭುತ್ವ ಸ್ಥಾಪಿಸುವ ನೆಪದಲ್ಲಿ ಏನೆಲ್ಲ ಮಾಡಿತು. ಈಗಲೂ ಮಾಡುತ್ತಿದೆ.
ಹೀಗಾಗಿ ಅಸಹಾಯಕತೆ, ಹತಾಶೆಗಳು- ಸಿಟ್ಟು, ಆಕ್ರೋಶದ ರೂಪದಲ್ಲಿ ಮಡುಗಟ್ಟಿದವು. ಅಮೆರಿಕವನ್ನು ಎದುರಿಸಲು ಒಸಾಮಾ ಬಿನ್ ಲ್ಯಾಡೆನ್ನಂಥ ಧಾರ್ಮಿಕ ಮೂಲಭೂತವಾದಿಗಳು ಜನ್ಮ ತಾಳಿದರು. ಅವರ ಸಂಖ್ಯೆ ಎಲ್ಲೆಡೆಯೂ ವ್ಯಾಪಕವಾಗಿ ಹಬ್ಬಿತು. ಯಾರ್ಯಾರು ಅಮೆರಿಕದ ನೀತಿಯನ್ನು ಪಾಲಿಸುತ್ತಾರೋ ಅಂಥ ದೇಶಗಳನ್ನು ಗುರಿಯಾಗಿಟ್ಟುಕೊಂಡು ಜೆಹಾದಿ ಸಂಘಟನೆಗಳು ಹುಟ್ಟಿಕೊಂಡವು. ಕಣ್ಣು ಮುಚ್ಚಿಕೊಂಡು ಜಾಗತೀಕರಣಕ್ಕೆ ತನ್ನನ್ನು ಒಡ್ಡಿಕೊಂಡು, ೧೯೯೨ರಿಂದೀಚೆ ಅಮೆರಿಕವನ್ನು ಚಾಚು ತಪ್ಪದೆ ಪಾಲಿಸಿಕೊಂಡು ಬರುವಂತೆ ಮಾಡಿದ ಅಂದಿನ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್, ವಿತ್ತ ಸಚಿವ ಮತ್ತು ಇಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ರಂಥವರ ತಪ್ಪು ನೀತಿಗಳಿಂದಾಗಿ ಭಯೋತ್ಪಾದನೆಯ ಕೂಪದಲ್ಲಿ ನಮ್ಮ ದೇಶ ಸಿಕ್ಕಿ ನಲುಗುವಂತಾಯಿತು. ಈಗ ಇನ್ನಷ್ಟು ಅಮೆರಿಕಮಯವಾಗಿರುವ ಭಾರತದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ದೇಶದಲ್ಲೆಲ್ಲ ಜಾರ್ಜ್ ಬುಷ್ನ ಕರಾಳ ಮುಖವೇ ಕಾಣುತ್ತಿದೆ! ಹೀಗಾಗಿ ದೇಶ ಇನ್ನೂ ನಲುಗಲಿದೆ ಎಂಬುದು ಸುಳ್ಳಲ್ಲ.
ಅಸಮ ಹಂಚಿಕೆ:
’ಗೋಳಿಕರಣ’ (ಗ್ಲೋಬಲೈಜೇಷನ್)ದಿಂದ ಭಯೋತ್ಪಾದನೆ ಇನ್ನಷ್ಟು ಹೆಚ್ಚುತ್ತಿದೆ. ಜಾಗತೀಕರಣದಿಂದಾಗಿ ಅತ್ಯಂತ ಕೊರತೆ ಇರುವ ಸಂಪನ್ಮೂಲಗಳ ಅಸಮ ವಿತರಣೆಯಾಗುತ್ತಿದೆ. ಭಯಂಕರ ಆರ್ಥಿಕ ಅಸಮಾನತೆ ಸೃಷ್ಟಿಯಾಗುತ್ತಿದೆ. ಹೀಗಾಗಿ, ಲಿಚ್ಬಾಕ್ ಎಂಬ ಸಮಾಜ ವಿಜ್ಞಾನಿ ಹೇಳುವಂತೆ ’ಇನ್ಇಕ್ವಾಲಿಟಿಯಿಂದ ಪಾಲಿಟಿಕಲ್ ಕಾನ್ಫ್ಲಿಕ್ಟ್’ ಹುಟ್ಟಿಕೊಳ್ಳುತ್ತಿದೆ. ಪರಿಣಾಮವಾಗಿ ಬದುಕುವ ಆಶಾಕಿರಣಗಳು ನೀರ ಮೇಲಿನ ಗುಳ್ಳೆಗಳಾಗುತ್ತಿವೆ. ಭಯೋತ್ಪಾದಕರಿಗೆ ಜಾತಿ ಇಲ್ಲ; ಧರ್ಮವಿಲ್ಲ ಎಂದು ನಮ್ಮ ಪಾಲಸಿ ಮೇಕರ್ಗಳು ಹೇಳುತ್ತಲೇ ಬರುತ್ತಿದ್ದಾರೆ ಮತ್ತು ಜನರ ಕಣ್ಣಿಗೆ ಮಣ್ಣೆರಚುತ್ತಲೇ ಇದ್ದಾರೆ.
ಈಗ ೧೭ ವರ್ಷಗಳ ಹಿಂದೆ ಮೇ ೨೧ರಂದು ದಿವಂಗತ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಿದ ಭಯೋತ್ಪಾದಕರನ್ನು ಹೊರತು ಪಡಿಸಿದರೆ, ನಮ್ಮ ದೇಶದಲ್ಲಿ ಭಯೋತ್ಪಾದನೆ ನಡೆದಿರುವುದು ಧಾರ್ಮಿಕ ಕಾರಣದಿಂದಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ರಾಜೀವ್ ಹಂತಕರು ಮಾತ್ರ ಧಾರ್ಮಿಕ ಕಾರಣಕ್ಕಾಗಿ ಭಯೋತ್ಪಾದನೆಗೆ ಇಳಿದಿರಲಿಲ್ಲ. ಅವರಲ್ಲಿ ಕೇವಲ ಸೇಡಿನ ಭಾವನೆಯಿತ್ತು. ಸೇಡು ತೀರಿಸಿಕೊಳ್ಳಲಿಕ್ಕಾಗಿ ಆತ್ಮಹತ್ಯಾ ದಳದವರು ರಾಜೀವ್ರ ಬಲಿ ತೆಗೆದುಕೊಂಡರು. ಆದರೆ, ಇಂದಿರಾ ಗಾಂಧಿಯನ್ನು ಹತ್ಯೆ ಮಾಡಿದ್ದು ಕೂಡ ಧಾರ್ಮಿಕ ಭಯೋತ್ಪಾದನೆಯೇ. ಇಷ್ಟೆಲ್ಲಾ ಉದಾಹರಣೆಗಳಿದ್ದರೂ ನಮ್ಮ ನಾಯಕರು ಭಯೋತ್ಪಾದಕರಿಗೆ ಧರ್ಮವಿಲ್ಲ; ಜಾತಿಯಿಲ್ಲ ಎಂದು ಬೊಗಳೆ ಬಿಡುತ್ತಾ ತಮ್ಮ ಪೊಳ್ಳು ಜಾತ್ಯತೀತತೆ ಪ್ರದರ್ಶನ ಮಾಡುತ್ತಾರೆ. ಈಗ ನಮ್ಮ ದೇಶದಲ್ಲಿ ಮತ್ತು ವಿಶ್ವದ ಬಹುತೇಕ ಕಡೆಗಳಲ್ಲಿ ನಡೆಯುತ್ತಿರುವುದು ಧಾರ್ಮಿಕ ಭಯೋತ್ಪಾದನೆ ಎಂಬುದು ಸೂರ್ಯನಷ್ಟೇ ಸತ್ಯ. ಧಾರ್ಮಿಕ ಭಯೋತ್ಪಾದನೆಯನ್ನು ತಡೆಯಬೇಕೆಂದರೆ ಮೊಟ್ಟ ಮೊದಲನೆಯದಾಗಿ ಪಶ್ಚಿಮ ದೇಶಗಳ ನೀತಿಯನ್ನು- ಅದರಲ್ಲೂ ಅಮೆರಿಕದ ಹಿಂಬಾಲಕರಾಗಿ ಹೋಗುವುದನ್ನು ನಮ್ಮ ದೇಶದ ಘನತೆವೆತ್ತ ನಾಯಕರು ಬಿಡಬೇಕು. ನಮ್ಮನ್ನು ನಾವೇ ಆರಿಸಿದ ಸರ್ಕಾರಗಳು ಆಳಬೇಕೆ ಹೊರತು, ಖಾಸಗಿ ಧಣಿಗಳಲ್ಲ. ಈ ದೇಶದಲ್ಲಿ ನಡೆಯುತ್ತಿರುವ ಸಂಪತ್ತಿನ ಅಸಮಾನ ಹಂಚಿಕೆ ತಡೆಯಬೇಕು. ಸಂಪತ್ತು ಸಮಾಜದ ಸ್ವತ್ತಾಗಬೇಕು. ಅದು ಯಾವುದೇ ಒಬ್ಬ ವ್ಯಕ್ತಿಯ ಅಡಿಯಾಳಾಗಬಾರದು. ಕಾನೂನುಗಳು ಯಾವುದೇ ಧರ್ಮ ಗ್ರಂಥಗಳು, ಜಾತಿಯ ’ಕೋಡ್’ಗಳನ್ನು ಆಧರಿಸಿರಬಾರದು. ಎಲ್ಲರಿಗೂ ಒಂದೇ ಕಾನೂನು, ಎಲ್ಲರಿಗೂ ಒಂದೇ ನ್ಯಾಯ- ಎಂಬ ತತ್ವ ಜಾರಿಗೆ ಬರಬೇಕು. ಸಮಾನತೆ ಏಕಮಂತ್ರವಾಗಬೇಕು. ಸಮಬಾಳು ಎಲ್ಲರಿಗೂ ಸಿಗಬೇಕು. ಈ ದೇಶದಲ್ಲಿ ಹೀಗೆಂದಾದರೂ ಆಗಲು ಸಾಧ್ಯವೇ? (ಖಾಸಗಿ ವ್ಯಕ್ತಿಗಳ ಹಣದಿಂದ ಸಂಸತ್ತನ್ನೇ ಖರೀದಿಸಿ ಮೆರೆಯುತ್ತಿರುವ ಕಿಂಗ್ ಸಿಂಗ್ರ ದುಷ್ಟ ನೀತಿಗಳು ಮುಂದುವರಿದದ್ದೇ ಆದರೆ, ಇದು ಎಂದೆಂದಿಗೂ ಸಾಧ್ಯವಿಲ್ಲ!) ಸಾಧ್ಯವಿಲ್ಲದಿದ್ದರೆ ಭಯೋತ್ಪಾದನೆಗೆ ಸದ್ಯೋಭವಿಷ್ಯದಲ್ಲಿ ಯಾವುದೇ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ನನಗೆಲ್ಲೂ ಕಾಣಿಸುತ್ತಿಲ್ಲ.
* * * * * *

Subscribe to:
Posts (Atom)